Journal: Int. J Adv. Std. & Growth Eval.

Mail: allstudy.paper@gmail.com

Contact: +91-9650866419

INTERNATIONAL JOURNAL OF
ADVANCE STUDIES AND GROWTH EVALUATION

Impact factor (QJIF): 8.4  E-ISSN: 2583-6528


Multidisciplinary
Refereed Journal
Peer Reviewed Journal

INTERNATIONAL JOURNAL OF ADVANCE STUDIES AND GROWTH EVALUATION


VOL.: 5 ISSUE.: 8(August 2026)

ಭಾರತೀಯ ಮತ್ತು ಪಾಶ್ಚಿಮಾತ್ಯ ಕಾವ್ಯ ಶಾಸ್ತ್ರದಲ್ಲಿ 'ಭವ್ಯತೆ' (Sublime) ಪರಿಕಲ್ಪನೆಯ ತೌಲನಿಕ ಚರ್ಚೆಗಳು


Author(s): Dr. Sumangala Reddy


Abstract:

ಪಾಶ್ಚಾತ್ಯ ಕಾವ್ಯಮೀಮಾಂಸೆಯಲ್ಲಿ ಬಳಕೆಯಾಗುವ ಸಬ್ ಲೈಮ್ ಎಂಬ ಮಾತಿಗೆ ಸಂವಾದಿಯಾಗಿ 'ಭವ್ಯತೆ' ಎಂಬ ಮಾತನ್ನು ಬಳಸಲಾಗುತ್ತಿದೆ. ಕನ್ನಡದ ಸಂದರ್ಭದಲ್ಲಿ ಈ ಮಾತನ್ನು ಮೊದಲು ಟಂಕಿಸಿ, ವಿವರಿಸಿದವರು ಕುವೆಂಪು ಅವರು, ಲಾಂಗಿನಸ್ಸ ಎಂಬ ರೋಮನ್ ಸಾಹಿತ್ಯ ಮೀಮಾಂಸಕನದೆಂದು ಹೇಳಲಾದ ಆನ್ ಸಬ್ಲೈಮ್ ಕೃತಿಯಲ್ಲಿ ಕಾವ್ಯದಿಂದ ಒದಗುವ ಸೌಂದರಾನುಭವದ ಒಂದು ಉನ್ನತ ಸ್ಥಿತಿಯನ್ನು ಸಬ್ಲೈಮ್ ಎಂದು ಹೇಳಲಾಗಿದೆ. ಭವ್ಯತೆ'ಗೆ ರಷ್ಯನ್ ಭಾಷೆಯಲ್ಲಿ Prostor ಎಂಬ ಪದವನ್ನು ಬಳಸುವಂತೆ ತೋರುತ್ತದೆ. Prestor ಎಂದರೆ ಭಯದ ಸೋಂಕೇ ಇಲ್ಲದ ವಿಸ್ತಾರ ಎಂದು ಅರ್ಥ. ದೃಗ್ಗೋಚರವಾಗುವ ವಿಸ್ತಾರವಾದ ಹುಲ್ಲುಗಾವಲುಗಳು, ಹೊನ್ನತನೆ ತೂಗುವ ಗದ್ದೆಯ ಹರವು. ಯಾವುದು ಯಾವ ರೂಪದಲ್ಲಾದರೂ ಭಯೋತ್ಪಾದಕವೋ ಅಥವಾ ಅದಕ್ಕೆ ಸಂಬಂಧಪಟ್ಟುದೋ ಅಥವಾ ಭಯಕ್ಕೆ ಸಂವಾದಿಯಾದ ರೂಪದಲ್ಲಿ ವರ್ತಿಸುತ್ತದೆಯೋ ಅದು ಭವ್ಯತೆಯ ಉಗಮಕ್ಕೆ ಕಾರಣ. ಭೀತಿಯಾಗಲಿ ವೇದನೆಯಾಗಲೀ ತೀರ ಸನಿಯವಾದಾಗ ಅವು ಯಾವ ಆನಂದವನ್ನೂ ನೀಡಲಾರವು; ಆಗ ಅವು ಬರಿ ಭಯಂಕರವಾಗಿ ತೋರುತ್ತವೆ, ಆದರೆ ಭಯವನ್ನುಂಟುಮಾಡುವ ವಸ್ತುಗಳೂ, ಅವುಗಳಿಂದ ಕೊಂಚ ಸರಿದು ನಿಂತು ನೋಡಿದಾಗ, ಮತ್ತು ಹಲವು ಮಾರ್ಪಾಡುಗಳಿಂದ ಆನಂದದಾಯಕವಾಗಬಲ್ಲುವು;

keywords:
ಗ.ಭ-ಗಣಿತಾತ್ಮಕ (Mathematical) ಭವ್ಯ, ಶ.ಭ-ಶಕ್ತಾತ್ಮಕ (Dynamic) ಭವ್ಯ, ಸ.ಭ.-ಸರಣಿ ಭವ್ಯ. OS-ON THE SUBLIME, ಅ.ನ.-ಅಹಂಕಾರ ನಷ್ಟ, ಬ್ರ.ಲಾ-.-ಬ್ರಹ್ಮ ಲಾಭ ಭ.ಮಾ.-'ಭವ್ಯ ಮಾನಸ

Pages: 08-16     |    5 View     |    1 Download

How to Cite this Article:

Dr. Sumangala Reddy. ಭಾರತೀಯ ಮತ್ತು ಪಾಶ್ಚಿಮಾತ್ಯ ಕಾವ್ಯ ಶಾಸ್ತ್ರದಲ್ಲಿ 'ಭವ್ಯತೆ' (Sublime) ಪರಿಕಲ್ಪನೆಯ ತೌಲನಿಕ ಚರ್ಚೆಗಳು. Int. J Adv. Std. & Growth Eval. 2026; 5(8):08-16,